Sunday 24 July 2011

ಈ ಲೋಕ ಆ ಲೋಕ_ಜುಲೈ 24_ ರಾಜೇಶ(ಹಳ್ಳಿ ಹೈದ ಪ್ಯಾಟೆಗ್ ಬಂದ_ಜಂಗಲ್ ಜಾಕಿ)



ಶ್ರೀ ರಾಮಚಂದ್ರ ಗುರುಜಿ ಸುವರ್ಣ ವಾಹಿನಿಯ ರಿಯಾಲಿಟಿ ಶೋ ಹಳ್ಳಿ ಹೈದ ಪ್ಯಾಟೆಗ್ ಬಂದ ನ ವಿಜೇತ ರಾಜೇಶನ ಊರಾದ ಬಳ್ಳೆಹಾಡಿ( ಹೆಗ್ಗಡ ದೇವನ ಕೋಟೆ ತಾಲೂಕು, ಮೈಸೂರು ಜಿಲ್ಲೆ) ಭೇಟಿ ನೀಡಿ ರಾಜೇಶ ಮತ್ತು ಆತನ ಕುಟುಂಬದೊಂದಿಗೆ ಚರ್ಚಿಸಿ ನಂತರ ರಾಜೇಶನ ಹೊಸ ಚಲನಚಿತ್ರ ಜಂಗಲ್ ಜಾಕಿ ಚಿತ್ರದ ಬಗ್ಗೆ ಮಾತನಾಡುತ್ತಾರೆ. ನಂತರ ರಾಜೇಶನ ಭವಿಷ್ಯವನ್ನು ನೋಡಲು ಆತನ ಸೂಪ್ತ ಮನಸ್ಸಿಗೆ ಹೇಳಿದಾಗ ಆರಂಭದಲ್ಲಿ ಅಸ್ಪಸ್ಟತೆಯನ್ನು ಕಂಡ ರಾಜೇಶ್ ತರುವಾಯ ತನ್ನ ಭವಿಷ್ಯದ ಕೆಲವು ತುಣುಕುಗಳನ್ನು ನೋಡುತ್ತಾನೆ. ತನ್ನ ಅಭಿಮಾನಿಗಳಿಗೆ, ಕಷ್ಟದಲ್ಲಿರುವವರಿಗೆ ಹಾಗು ತನ್ನ ಗ್ರಾಮಸ್ಥರಿಗೆ ಸಹಾಯ ಮಾಡುತ್ತಿರುವಂತೆ, ಮತ್ತು ಚಲಚಿತ್ರೋದ್ಯಮದ ಕೆಲವು ವ್ಯಕ್ತಿಗಳು ಆತನ ಕಾಲು ಎಳೆಯುತ್ತಿರುವುದು ಅದರ ವಿರುದ್ದ ಇವನು ತಿರುಗಿ ಬೀಳುವುದು, ಆತನ ಚಿತ್ರಗಳು ಥಿಯೇಟರ್ ಗಳಲ್ಲಿ ಸರಿಯಾಗಿ ಪ್ರದರ್ಶನ ಕಾಣದೆ ಇರುತ್ತಿರುವುದು, ನಂತರ ತನ್ನ ಹಳ್ಳಿಗೆ ಹಿಂತಿರುಗಿ ಅಲ್ಲಿಯೇ ಉಳಿಯುವುದು, ಬೆಂಗಳುರಿನಲ್ಲಿ ಆತನ ಮದುವೆ( ಮದುವೆ ಆಗುವ ಹುಡುಗಿ ಯಾರೆಂದು ಆತನಿಗೆ ಗೊತ್ತಾಗಲಿಲ್ಲ, ಆದರೆ ನೋಡಲು ಚೆನ್ನಗಿದ್ದಾಳೆಂದು ಮಾತ್ರ ಹೇಳುತ್ತಾನೆ) ಇನ್ನು ಮಕ್ಕಳಿಲ್ಲದಿರುವುದು ಹೇಳುತ್ತಾನೆ.
ಸುಪ್ತ ಸ್ಥಿತಿಯಿಂದ ಜಾಗೃತಾವಸ್ತೆಗೆ ಬಂದ ನಂತರ ರಾಜೇಶ ಭವಿಷ್ಯದಲ್ಲಿ ತಾನು ಚಲನಚಿತ್ರಗಳಲ್ಲಿ ಹೆಚ್ಚು ಕಾಣದೆ ಇರುವುದನ್ನು ಹೇಳುತ್ತಾನೆ.
ಗುರುಜಿ ಗಳ ಪ್ರಕಾರ ರಾಜೇಶ ಆಳವಾದ ಸಮ್ಮೋಹಿನಿ ಸ್ಥಿತಿಗೆ ತಲುಪಲು ಸಾಧ್ಯವಾಗಲಿಲ್ಲ. ಕಾರಣ ಹೊರಗಿನ ಪರಿಸರದಲ್ಲಿದ ಜೀರುಂಡೆಯ ಶಬ್ದ ಹಾಗು ರಾಜೇಶನಿಗೆ ಸಮ್ಮೋಹಿನಿ ಅಥವಾ ಧ್ಯಾನ ಪ್ರಕ್ರಿಯೆಯ ಆಳ ಅಗಲದ ಪರಿಚಯವಿಲ್ಲದಿರುವುದು


.Sri Ramachandra Guruji visited Rajesh's(The winner of Suvarna Channel's Reality show Halli Haida Pyateg Banda) place Ballehaadi, Heggada Devana Kote Taluq, Mysore dist. After a conversation with him and his family guruji started to ask about his Film career and his forthcoming kannada movie Jungle Jackie. Guruji tried to progress his subconscious mind to his future to know his career life. Initially he doesn't goto trance after a sometime he getting vision of his future. The future Rajesh being greeted by his fans and his villagers and he is helping his fans, poor peoples and his village people and he is pulled back by the some of the people in film industry, his movies are not running in theaters, due this is incident he came back to his village and settled there only, he get married to a girl, marriage is in Bengaluru and he dont know the girl who he is going to marry, and she is looking good for him, he is happy with her, no chlidrens yet at that time. After coming back from trance he tells that, in future he may be not acting in movies or doing good.
According to Guruji rajesh was not able to goto Deep trance due to noise around the area, and he is not familair to this process.

Sunday 26 June 2011

ಈ ಲೋಕ ಆ ಲೋಕ_ಜೂನ್ 26_ ಭಾಗ 3


ಮಾನುಷ ಎಂಬ ಶಾಲಾ ಬಾಲಕಿ,  ಪ್ರತಿ ದಿನ ತನ್ನ ಕನಸ್ಸಿನಲ್ಲಿ ಹಾವುಗಳನ್ನು ಕಂಡಂತೆ ತನ್ನ ಸುತ್ತ ಮುತ್ತ ಹಾವುಗಳು ಹರಿದಾಡುತ್ತಿರುವಂತೆ  ಭಾಸವಾಗುವುದೆಂದು ಸಮ್ಮೋಹನ ಸ್ಥಿತಿಯಲ್ಲಿದ್ದಾಗ ಹೊರಗೆಡವುತ್ತಾಳೆ. ಸಮ್ಮೋಹನ ಸ್ಥಿತಿಯಲ್ಲಿ  ಸುಪ್ತ ಮನಸ್ಸು ತೊಂದರೆಯ ಮೂಲ ಹುಡುಕಿದಾಗ, ಹಿಂದೆ ಯಾವಾಗಲೋ, ಶಾಲೆಯಿಂದ ಬರುತ್ತಿರಬೇಕಾದರೆ ರಸ್ತೆ ಬದಿಯಲ್ಲಿ ಹಾವು ಕಂಡು ಭಯದಿಂದ ಮನೆಗೆ ಓಡಿ ಬರುತ್ತಾಳೆ. ಆ ಭಯ ಸುಪ್ತ ಮನಸ್ಸಿನಲ್ಲಿ ಹುದುಗಿಕೊಂಡು ಅದು ಪ್ರತಿನಿತ್ಯ ಕನಸ್ಸಿನಲ್ಲಿ ಗೋಚರವಾಗುತ್ತಿತ್ತು. ರಾಮಚಂದ್ರ ಗುರುಜಿ ಆಕೆಯ ಸುಪ್ತ ಮನಸ್ಸಿನಿಂದ ಆ ಭಯವನ್ನು ಹೊರ ಹಾಕಿ ಹಾವಿನ ಬಗ್ಗೆ ಇರುವ ಭಯ ಮತ್ತು ಆತಂಕವನ್ನು ದೂರ ಮಾಡಿ ಅವಳ ವಿದ್ಯಾಬ್ಯಾಸದ ಕಡೆಗೆ ಹೆಚ್ಚಿಯ ಗಮನವನ್ನು ಹಾಗು ಕಷ್ಟಕರವಾದ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಅವಳ ಸುಪ್ತ ಮನಸ್ಸಿಗೆ ಸೂಚನೆ ಕೊಡುತ್ತಾರೆ.
ನಂತರ ಅವಳ ಮನಸ್ಸನ್ನು ಪರೀಕ್ಷೆಯ ದಿನದಂದು ಹಾಗು ಫಲಿತಾಂಶ ದಿನದೆಡೆಗೆ ಕೊಂಡೊಯ್ದಾಗ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳನ್ನು ಚೆನ್ನಾಗಿ ಮಾಡುತ್ತಿರುವೆನೆಂದು ಹಾಗು ಅತ್ಯುತ್ತಮ ಫಲಿತಾಂಶ ಬಂದಿದೆಯೆಂದು ತನ್ನ ಸುಪ್ತ ಮನಸ್ಸಿನ ಮೂಲಕ ವ್ಯಕ್ತಪಡಿಸುತ್ತಾಳೆ.

This is hypnotic session of a School girl who experiencing recurrent dreams of snake crawling near her every night in sleep.
When she regressed she explained the root cause of that dream. One day while she coming form school she found a big snake near roadside and she got scared and ran away to home. This surpress memory stored in her subconscious mind and it was reflecting in her dream. Guruji removed the fear of the snake from her mind and he helped to her in studies(difficulty of Subjects) and progressed to her exam day to confirm how she is doing in her forth coming exams. She found herself doing well and got out of out marks.