Sunday 26 June 2011

ಈ ಲೋಕ ಆ ಲೋಕ_ಜೂನ್ 26_ ಭಾಗ 3


ಮಾನುಷ ಎಂಬ ಶಾಲಾ ಬಾಲಕಿ,  ಪ್ರತಿ ದಿನ ತನ್ನ ಕನಸ್ಸಿನಲ್ಲಿ ಹಾವುಗಳನ್ನು ಕಂಡಂತೆ ತನ್ನ ಸುತ್ತ ಮುತ್ತ ಹಾವುಗಳು ಹರಿದಾಡುತ್ತಿರುವಂತೆ  ಭಾಸವಾಗುವುದೆಂದು ಸಮ್ಮೋಹನ ಸ್ಥಿತಿಯಲ್ಲಿದ್ದಾಗ ಹೊರಗೆಡವುತ್ತಾಳೆ. ಸಮ್ಮೋಹನ ಸ್ಥಿತಿಯಲ್ಲಿ  ಸುಪ್ತ ಮನಸ್ಸು ತೊಂದರೆಯ ಮೂಲ ಹುಡುಕಿದಾಗ, ಹಿಂದೆ ಯಾವಾಗಲೋ, ಶಾಲೆಯಿಂದ ಬರುತ್ತಿರಬೇಕಾದರೆ ರಸ್ತೆ ಬದಿಯಲ್ಲಿ ಹಾವು ಕಂಡು ಭಯದಿಂದ ಮನೆಗೆ ಓಡಿ ಬರುತ್ತಾಳೆ. ಆ ಭಯ ಸುಪ್ತ ಮನಸ್ಸಿನಲ್ಲಿ ಹುದುಗಿಕೊಂಡು ಅದು ಪ್ರತಿನಿತ್ಯ ಕನಸ್ಸಿನಲ್ಲಿ ಗೋಚರವಾಗುತ್ತಿತ್ತು. ರಾಮಚಂದ್ರ ಗುರುಜಿ ಆಕೆಯ ಸುಪ್ತ ಮನಸ್ಸಿನಿಂದ ಆ ಭಯವನ್ನು ಹೊರ ಹಾಕಿ ಹಾವಿನ ಬಗ್ಗೆ ಇರುವ ಭಯ ಮತ್ತು ಆತಂಕವನ್ನು ದೂರ ಮಾಡಿ ಅವಳ ವಿದ್ಯಾಬ್ಯಾಸದ ಕಡೆಗೆ ಹೆಚ್ಚಿಯ ಗಮನವನ್ನು ಹಾಗು ಕಷ್ಟಕರವಾದ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಅವಳ ಸುಪ್ತ ಮನಸ್ಸಿಗೆ ಸೂಚನೆ ಕೊಡುತ್ತಾರೆ.
ನಂತರ ಅವಳ ಮನಸ್ಸನ್ನು ಪರೀಕ್ಷೆಯ ದಿನದಂದು ಹಾಗು ಫಲಿತಾಂಶ ದಿನದೆಡೆಗೆ ಕೊಂಡೊಯ್ದಾಗ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳನ್ನು ಚೆನ್ನಾಗಿ ಮಾಡುತ್ತಿರುವೆನೆಂದು ಹಾಗು ಅತ್ಯುತ್ತಮ ಫಲಿತಾಂಶ ಬಂದಿದೆಯೆಂದು ತನ್ನ ಸುಪ್ತ ಮನಸ್ಸಿನ ಮೂಲಕ ವ್ಯಕ್ತಪಡಿಸುತ್ತಾಳೆ.

This is hypnotic session of a School girl who experiencing recurrent dreams of snake crawling near her every night in sleep.
When she regressed she explained the root cause of that dream. One day while she coming form school she found a big snake near roadside and she got scared and ran away to home. This surpress memory stored in her subconscious mind and it was reflecting in her dream. Guruji removed the fear of the snake from her mind and he helped to her in studies(difficulty of Subjects) and progressed to her exam day to confirm how she is doing in her forth coming exams. She found herself doing well and got out of out marks.

No comments:

Post a Comment